News

Back

ನೇತ್ರದಾನ ಪಾಕ್ಷಿಕ ದಿನಾಚರಣೆ
06.09.2017 ರ ಬುಧವಾರ ಬೆಳಿಗ್ಗೆ 10.30 ಕ್ಕೆ ಲಯನ್ಸ್ ಕ್ಲಬ್ ದೊಡ್ಡಬಳ್ಳಾಪುರ ಹಾಗೂ ಅಭಿಷೇಕ್ ನೇತ್ರಧಾಮ ನೇತೃತ್ವದಲ್ಲಿ ನೇತ್ರದಾನ ಪಾಕ್ಷಿಕ ದಿನಾಚರಣೆ ಆಚರಿಸಿ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸಲು ಚಿಕ್ಕಪೇಟೆಯ ಸ್ವಾಮಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳ ಜತೆ ಜಾತಾ ನಡೆಸಲಾಯಿತು. ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಗಿರೀಶ್. ಡಾ. ಮಂಜುನಾಥ್ ಮತ್ತು ನೇತ್ರಾಧಿಕಾರಿಗಳಾದ ಡಿ. ಆರ್. ಶಿವಕುಮಾರ್ ಮತ್ತು ಎಸ್. ಮೂರ್ತಿ ರವರುಗಳು ಭಾಗವಹಿಸಿದ್ದರು. ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಲಯನ್ ಡಿ. ಕೆ. ಸೋಮಶೇಖರ್. ಕಾರ್ಯದರ್ಶಿ ಆರ್. ಎಸ್. ಮಂಜುನಾಥ್. ಹಾಗೂ ಖಜಾಂಚಿ ಸಿ ಎನ್. ರಾಜಶೇಖರ್ ಉಪಸ್ಥಿತರಿದ್ದರು.