News

Back

ಭಗತ್ ಸಿಂಗ್ ಜಯಂತಿ ಸಂದರ್ಭ ವೀರ ಸೇನಾ ಯೋಧರಿಗೆ ಗೌರವಾರ್ಪಣೆ

+ಶ್ರೀ ಗಂಗಾ ಭಗತ್‌ಸಿಂಗ್-ಚಂದ್ರಶೇಖರ್ ಆಜಾದ್ ಆಸ್ಪತ್ರೆ,
ಲಯನ್ಸ್ ಕ್ಲಬ್ ದೊಡ್ಡಬಳ್ಳಾಪುರ, ಲಯನೆಸ್ ಕ್ಲಬ್,ಲಯನ್ಸ್ ಛಾರಿಟೀಸ್ ಟ್ರಸ್ಟ್, ದೊಡ್ಡಬಳ್ಳಾಪುರ ಡಯಾಗ್ನೋಸ್ಪಿಕ್ ಸೆಂಟರ್
ಮತ್ತು ಯುವ ಬ್ರಿಗೇಡ್ ಸಂಯುಕ್ತ ಆಶ್ರಯದಲ್ಲಿ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಸರ್ದಾರ್ *ಭಗತ್ ಸಿಂಗ್*
ಜನ್ಮ ದಿನಾಚರಣೆಯ ಶುಭ ಸಂದರ್ಭದ ಪ್ರಯುಕ್ತ ನಿನ್ನೆ 27-9-17 ನಡೆದ *ದೊಡ್ಡಬಳ್ಳಾಪುರದಿಂದ ಭಾರತೀಯ ಸೇನೆಯಲ್ಲಿ ಸೇವೆ*
*ಸಲ್ಲಿಸಿರುವ ಮತ್ತು ಸಲ್ಲಿಸುತ್ತಿರುವ ವೀರ ಯೋಧರಿಗೆ* *ಗೌರವಾರ್ಪಣೆ*ಕಾರ್ಯಕ್ರಮವನ್ನು ನಗರಸಭಾ ಅಧ್ಯಕ್ಷರಾದ
*K.B.ಮುದ್ದಪ್ಪ*ಉದ್ಘಾಟಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷರಾದ
*D.K.ಸೋಮಶೇಖರ್*ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ರವಿಕುಮಾರ್( ಕಾರ್ಗಿಲ್ ಯುದ್ಧ ಯೋಧರು),
ಶ್ರೀ ಸೋಮೇಶ್ (ಅವಲ್ದಾರ್,ಭೂಸೇನೆ,ಮಧ್ಯಪ್ರದೇಶ ),

ಶ್ರೀ ರಾಜಘಟ್ಪರವಿ (ರಾಜ್ಯ ಕಾರ್ಯದರ್ಶಿ, ಕರ್ನಾಟಕ ರಕ್ಷಣಾ ವೇದಿಕೆ, ಪ್ರವೀಣ್ ಶೆಟ್ಟಿ ಬಣ) ಮತ್ತು ಅನೇಕ ಲಯನ್,ಲಯನೆಸ್ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.
*ಸಮಾಜಮುಖಿ ಸೇವೆಯನ್ನು ನಿರಂತರವಾಗಿ ನಡೆಸಿಕೊಂಡು*
*ಬರುತ್ತಿರುವ ಡಾ|| K.N.R.G.ರಮೇಶ ಗೌಡ ಮತ್ತು ಡಾ||G.*
*ವಿಜಯಲಕ್ಷ್ಮಿ ದಂಪತಿಗಳು ಹೃತ್ಪೂರ್ವಕ ಅಭಿನಂದನಾರ್ಹರು*