News

Back

238th IOL surgery Camp

*ಆತ್ಮೀಯ ಲಯನ್ ಮಿತ್ರರೇ,
ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್ ವತಿಯಿಂದ ಇಂದು*
*04-12-2017 ರಂದು ಸೋಮವಾರ ನಡೆದ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರವನ್ನು ಕರ್ನಾಟಕ ಸರ್ಕಾರದ ಮಾಜಿ‌ ಸಚಿವರಾದ ಶ್ರೀಮತಿ ರಾಣಿ ಸತೀಶ್ ರವರು ಉದ್ಘಾಟಿಸಿದರು*
*ಮುಖ್ಯ ಅತಿಥಿಗಳಾಗಿ ಶ್ರೀ R.N.ಸತೀಶ್ ಮತ್ತು ಪ್ರಾಯೋಜಕರಾದ ಶ್ರೀ ಸದಾಶಿವಯ್ಯ ರವರ ಕುಟುಂಬದವರು, ಶ್ರೀ ವಿಜಯಕುಮಾರ್ ಕುಟುಂಬದವರು ಹಾಗೂ ಶ್ರೀ ಅನಿಲ್ ಕುಟುಂಬದವರು ಉಪಸ್ಥಿತರಿದ್ದರು.*
*ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ D.K.ಸೋಮಶೇಖರ್ ರವರ ಅಧ್ಯಕ್ಷತೆಯಲ್ಲಿ ಈ ಶಿಬಿರವು ನಡೆಯಿತು.*
*ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಲಯನ್ ಛಾರಿಟೀಸ್ ಟ್ರಸ್ಟ್ ನ ಉಪಾಧ್ಯಕ್ಷರಾದ ಲಯನ್ A.ವೆಂಕಟೇಶ್ ಅವರ ಆತ್ಮಕ್ಕೆ ಶಾಂತಿಯನ್ನು ಕೋರಲಾಯಿತು.*
*ಕುಮಾರಿ ಪ್ರಿಯಾಂಕಾ ಪ್ರಾರ್ಥನೆಯೊಂದಿಗೆ ಸಭೆಯು ಪ್ರಾರಂಭವಾಯಿತು*
*ಲಯನೆಸ್ ಕ್ಲಬ್ ನ ಶ್ರೀಮತಿ ಶೈಲಾ ಜಯಕುಮಾರ್ ಧ್ವಜ ವಂದನೆ ನಡೆಸಿಕೊಟ್ಟರು.*
*1st V.P ಲಯನ್ K.V.ಪ್ರಭುಸ್ವಾಮಿ ವಂದನಾರ್ಪಣೆ ಮಾಡಿದರು.*
*ಶಿಬಿರದಲ್ಲಿ 83 ಜನರ ತಪಾಸಣೆ ಮಾಡಿ 55 ಮಂದಿಯನ್ನು ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿನ ವೆಸ್ಟ್ ಲಯನ್ ಆಸ್ಪತ್ರೆಗೆ ಕಳಿಸಿಕೊಡಲಾಯಿತು.*
*ಈಶಿಬಿರವನ್ನು ಅನೇಕ ಲಯನ್ ಮತ್ತು ಲಯನೆಸ್ ಸದಸ್ಯರು ಹಾಜರಿದ್ದು ನಡೆಸಿಕೊಟ್ಟರು.*